ದೈನಂದಿನ ಕೆಲಸದ ಒತ್ತಡಗಳ ನಡುವೆಯೇ ಮುಖವನ್ನು ಫ್ರೆಶ್ ಆಗಿ ಇರಿಸಿಕೊಳ್ಳುವುದೇ ಸವಾಲು. ತ್ವಚೆಯ ಸೌಂದರ್ಯದ ಕಾಪಿಡುವುದರಿಂದ ನಿಮ್ಮ ದಿನವೂ ಚೆನ್ನಗಿರುತ್ತದೆ. ಅದಕ್ಕಾಗಿ ಈ ಸುಲಭ ಟಿಪ್ಸ್ನ್ನು ಅನುಸರಿಸಬಹುದು.
ಮುಖ ತೊಳೆಯಿರಿ:
ಮುಖವು ಹೊಳೆಯುವಂತೆ ಮಾಡಲು, ಸಂಪೂರ್ಣವಾಗಿ ಸ್ವಚ್ಛಗೊಳಿಸೋದು ಬಹಳ ಮುಖ್ಯ. ಸೌಮ್ಯವಾದ ಫೇಸ್ ವಾಶ್ ನಿಂದ ಮುಖವನ್ನು ತೊಳೆಯಿರಿ. ಫೇಸ್ ವಾಶ್ ಬಳಸುವಾಗ, ಅದು ನಿಮ್ಮ ಚರ್ಮಕ್ಕೆ ಸರಿ ಹೊಂದಬೇಕು ಸಾಧ್ಯವಾದರೆ ಜೆಲ್ ಅಥವಾ ಫೋಮ್ ಆಧಾರಿತ ಫೇಸ್ ವಾಶ್ ಬಳಸಿ. ಬಾಯಿಯನ್ನು ಸರಿಯಾಗಿ ತೊಳೆಯಿರಿ, ಇದರಿಂದ ನಿಮ್ಮ ಮುಖದ ಸೌಂದರ್ಯ ಹೆಚ್ಚಾಗಲು ಪ್ರಾರಂಭಿಸುತ್ತದೆ.
ರೋಸ್ ವಾಟರ್ ಚರ್ಮಕ್ಕೆ ಉತ್ತಮ ಪರಿಹಾರ. ಇದನ್ನು ನೀವು ಬಳಸೋದರಿಂದ ನಿಮ್ಮ ಚರ್ಮಕ್ಕೆ ಹೊಳಪನ್ನು ತರಬಹುದು. ಮುಖ ತೊಳೆದ ನಂತರ, ನಿಮ್ಮ ಚರ್ಮದ ಮೇಲೆ, ಹತ್ತಿಯ ಉಂಡೆಯ ಮೂಲಕ ರೋಸ್ ವಾಟರ್ ಅನ್ನು ತೆಗೆದುಕೊಂಡು ನೀವು ಅದನ್ನು ಚೆನ್ನಾಗಿ ಮುಖಕ್ಕೆ ಹಚ್ಚ ಬಹುದು.
ಮಾಯಿಶ್ಚರೈಸರ್ ಬಳಸಿ:
ಸಾಬೂನನ್ನು ಬಳಸೋದರಿಂದ ನಿಮ್ಮ ಚರ್ಮ ಒಣಗಬಹುದು. ಇದನ್ನು ತಪ್ಪಿಸಲು, ನೀವು ಮಾಯಿಶ್ಚರೈಸರ್ ಬಳಸಬೇಕು. ಮಾಯಿಸ್ಚರೈಸರ್ ಮುಖಕ್ಕೆ ಹೆಚ್ಚು ಸಾಫ್ಟ್ ನೆಸ್ ನೀಡುತ್ತೆ. ಇದರಿಂದ ನಿಮ್ಮ ಮುಖ ತಾಜಾತನದಿಂದ ಕೂಡಿರಲು ಸಹಾಯ ಮಾಡುತ್ತೆ. ಮಾಯಿಶ್ಚರೈಸರ್ ಹಚ್ಚೋದ್ರಿಂದ ಚರ್ಮವು ಸಾಫ್ಟ್ ಆಗಿ, ಹೊಳೆಯುತ್ತೆ .ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವಂತಹ ಮಾಯಿಸ್ಚರೈಸರ್ ಬಳಕೆ ಮಾಡಿ. ಇಲ್ಲವಾದರೆ ಇದರಿಂದ ನಿಮ್ಮ ಚರ್ಮದ ಮೇಲೆ ಹಾನಿಯುಂಟಾಗಬಹುದು, ಎಚ್ಚರವಾಗಿರಿ.
ನೀವು ಎಲ್ಲಿಗಾದರೂ ಹೋಗುವುದಾದರೆ ನಿಮ್ಮ ಮುಖವನ್ನು ಬಟ್ಟೆ ಅಥವಾ ದುಪಟ್ಟಾದಿಂದ ಮುಚ್ಚಿಕೊಳ್ಳಿ ಏಕೆಂದರೆ ಅನಗತ್ಯ ಧೂಳಿನ ವಸ್ತು ಕೂರದ ಹಾಗೆ ನೋಡಿಕೊಳ್ಳುತ್ತೆ ಮತ್ತು ಮುಖವನ್ನು ರಕ್ಷಿಸಲು ಸಾಧ್ಯವಾಗುತ್ತೆ.